ಪಡುಬಿದ್ರಿ: ಕಾಪು ಬೀಚ್ಗೆ ಆಗಮಿಸಿದ್ದ ದಾವಣಗೆರೆ ಮೂಲದ ಪ್ರವಾಸಿಗರಿಬ್ಬರು ಭಾನುವಾರ ನೀರು ಪಾಲಾಗಿದ್ದಾರೆೆ. ದಾವಣಗೆರೆಯಿಂದ ಆಗಮಿಸಿದ್ದ13 ಮಂದಿಯಿದ್ದ ಪ್ರವಾಸಿಗರಲ್ಲಿ ನಾಲ್ಕು ಜನ ಸಮುದ್ರದಲ್. ಈ ವೇಳೆ ಬೀಚ್ನ ಜೀವ ರಕ್ಷಕರು ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಮೂವರನ್ನು ರಕ್ಷಿಸಿದ್ದಾರೆ. ಮೊಹಮ್ಮದ್ ಯೂಸುಪ್ ಮತ್ತು ಮೊಹಮ್ಮದ್ ಇಸಾಕ್ ಎಂಬವರನ್ನು ರಕ್ಷಿಸಲಾಗಿದೆ.ಸಮೀರ್(21) ಹಾಗೂ ಮಹಮ್ಮದ್ ರಿಯಾನ್(14) ನೀರು ಪಾಲಾಗಿದ್ದು, ಅವರಿಗಾಗಿ ಸ್ಥಳೀಯ ಮುಳುಗು ತಜ್ಞರು ಹಾಗೂ ಈಶ್ವರ ಮಲ್ಪೆ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ. ಸಮೀರ್ ಕುಂದಾಪುರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾಥಿಯಾಗಿದ್ದು, ರಿಹಾನ್ ದಾವಣಗೆರೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.