ಚಿತ್ರ: ಶಂಕರಾಭರಣ ನಿರ್ದೇಶನ: ಸುಮಂತ್ ಭಟ್ ತಾರಾಗಣ: ಶೈನ್ ಶೆಟ್ಟಿ, ತನ್ವಿ ರಾಮ್, ತನ್ವಿ ರಾವ್, ಸಂಪತ್ ರಾಜ್, ದೀಪಕ್ ರೈ ಪಾಣಾಜೆ ಮತ್ತಿತರರು.ಸಾಹುಕಾರ ಮಧುಕರನ ಟ್ರಾವೆಲ್ಸ್ನಲ್ಲಿ ಡ್ರೈವರ್. ಒಂದು ದಿನ ಸಾಹುಕಾರನ ಮಗ ಬಸ್ನಲ್ಲಿ ಕೆಟ್ಟ ಕೆಲಸ ಮಾಡಿದ ಎಂಬ ಕಾರಣಕ್ಕೆ ಆತನಿಗೆ ಶಂಕರ ಥಳಿಸುತ್ತಾನೆ. ಅದು ಮಧುಕರನ ಕೋಪಕ್ಕೆ ಕಾರಣವಾಗಿ ಶಂಕರನಿಗೆ ಅವಮಾನಿಸುತ್ತಾನೆ. ಅಷ್ಟು ದಿನ ನಿಷ್ಠಾವಂತ ಸೇವಕನಂತೆ ಕೆಲಸ ಮಾಡಿದ್ದ ಶಂಕರನ ಸ್ವಾಭಿಮಾನಕ್ಕೆ ಧಕ್ಕೆ ಬಂದು, ಆ ಟ್ರಾವೆಲ್ಸ್ನಿಂದ ಹೊರನಡೆದು, ಸ್ವಂತ ಬಸ್ ಖರೀದಿಸಬೇಕು ಎಂದು ಪಣ ತೊಡುತ್ತಾನೆ.