Heartbeat: ಮಹಿಳೆಯರ ಹೃದಯವು ಪುರುಷರ ಹೃದಯಕ್ಕೆ ಹೋಲಿಸಿದರೆ ಸಾಮಾನ್ಯವಾಗಿ ಸ್ವಲ್ಪ ವೇಗವಾಗಿ ಬಡಿದುಕೊಳ್ಳುತ್ತದೆ. ಆದರೆ ಇದರ ಹಿಂದಿರುವುದು ಕೇವಲ ಹೃದಯದ ಗಾತ್ರದ ವ್ಯತ್ಯಾಸವಷ್ಟೇ ಅಲ್ಲ. ಹಾರ್. ಹಾರ್ಮೋನ್ಗಳ ಪ್ರಭಾವ, ಹೃದಯದ ರಚನೆ, ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಸೇರಿದಂತೆ ಹಲವು ಸಂಕೀರ್ಣ ವೈಜ್ಞಾನಿಕ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾದರೆ, ಮಹಿಳೆಯರ ಹೃದಯ ಬಡಿತ ಪುರುಷರಿಗಿಂತ ತುಸು ಹೆಚ್ಚಾಗಿರಲು ನಿಜವಾದ ವೈಜ್ಞಾನಿಕ ಕಾರಣಗಳೇನು? ಬನ್ನಿ, ಇದರ ಹಿಂದಿನ ವಿಜ್ಞಾನವನ್ನು ಕುತೂಹಲಕರವಾಗಿ ತಿಳಿದುಕೊಳ್ಳೋಣ.ಹೃದಯ ಬಡಿತದ ದರ ಎಷ್ಟು?ಸಾಮಾನ್ಯವಾಗಿ, ವಿಶ್ರಾಂತಿ ಸ್ಥಿತಿಯಲ್ಲಿರುವ ವಯಸ್ಕ ಮಹಿಳೆಯರು ಮತ್ತು ಪುರುಷರಿಬ್ಬರಲ್ಲೂ ಹೃದಯ ಬಡಿತದ ಪ್ರಮಾಣ ನಿಮಿಷಕ್ಕೆ 60ರಿಂದ 100ರ ನಡುವೆ ಇರುತ್ತದೆ.