South Korea: ದಕ್ಷಿಣ ಕೊರಿಯಾದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣ ಭಾರಿ ವಿವಾದಕ್ಕೆ ಗುರಿಯಾಗಿ, ದೇಶವ್ಯಾಪಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್. ದಕ್ಷಿಣ ಕೊರಿಯಾದಲ್ಲಿ ಸುನ್ಯುಂಗ್ (Suneung) ಪರೀಕ್ಷೆಗೆ ವಿಶೇಷ ಮಹತ್ವವಿದೆ. ಒಂಬತ್ತು ಗಂಟೆಗಳ ಕಾಲ ನಡೆಯುವ ಈ ಪರೀಕ್ಷೆಯ ಫಲಿತಾಂಶವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರವೇಶ, ಉತ್ತಮ ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಪ್ರಮುಖವಾಗಿದೆ. ಹೀಗಾಗಿ, ಈ ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಆದರೂ ಹೀಗಾಗಿರುವುದು ಅಚ್ಚರಿ ಮೂಡಿಸಿದೆ.