ಚಿತ್ರದುರ್ಗ: ಜಡ್ಡುಗಟ್ಟಿದ ವಾತಾವರಣ ಎಲ್ಲೆಡೆ ಕಂಡು ಬರುತ್ತಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಬೆಳೆಸಬೇಕಿದೆ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ಗೌಡ ಹೇಳಿದ. ಈ ಹಿನ್ನೆಲೆಯಲ್ಲಿ ಕಲಿಕೆಯ ಭಾಗವಾಗಿರುವ ರಂಗ ಚಟುವಟಿಕೆಗಳ ಕಡೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಬೇಕಿದೆ ಎಂದರು.ನಾಟಕ, ಸಂಗೀತದ ಪರಿಚಯವಾದರೆ ಮಕ್ಕಳ ವ್ಯಕ್ತಿತ್ವದ ವಿಕಾಸವಾಗುತ್ತದೆ. ಸುಲಲಿತವಾಗಿ ಹಳಗನ್ನಡ ಪದಗಳ ನಂಟು ಬೆಳೆಸಿಕೊಂಡವರಿAದು ವೈದ್ಯರು, ಇಂಜಿನಿಯರ್ಗಳಾಗಿದ್ದಾರೆ. ಲಲಿತ ಕಲೆಗಳಿಂದ ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತದೆ ಎಂದರು.ಸಾಹಿತ್ಯ ದಿಗ್ಗಜರ ಜತೆ ಸ್ಥಳೀಯವಾಗಿ ನಾಡು, ನುಡಿಗೆ ನೀಡಿದ ಸಾಹಿತ್ಯ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳಬೇಕಿದೆ. ಸಾಂಸ್ಕೃತಿಕ ಸಂಘಟನೆ ಗಟ್ಟಿಯಾಗಿ ನೆಲೆಯೂರಿದರೆ ಸ್ಥಳಿಯ ವೈವಿಧ್ಯತೆ ದಾಖಲಾಗುತ್ತದೆ.