ಬೆಂಗಳೂರು : ನಗರದ ಎಚ್ಎಸ್ಆರ್ ಲೇಔಟ್ನ ಪರಿ ಡೆಂಟಲ್ ಕೇರ್ ಹಾಗೂ ಬಾಲಾಜಿ ವೆಲ್ಕಮ್ ಇಂಟರ್ನ್ಯಾಷನಲ್ (ಬಿಡಬ್ಲ್ಯೂಐ) ಸಹಯೋಗದಲ್ಲಿ ಭಾನುವಾರ ಉಚಿತ ದಂತ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿ. ಒಂದೇ ಸ್ಥಳದಲ್ಲಿ ಅತಿ ಹೆಚ್ಚು ‘ಬಾಲಾಜಿ’ ಹೆಸರಿನ ವ್ಯಕ್ತಿಗಳಿಗೆ ದಂತ ತಪಾಸಣೆ ನಡೆಸುವ ಮೂಲಕ ಕಾರ್ಯಕ್ರಮವು ಅಂತರರಾಷ್ಟ್ರೀಯ ದಾಖಲೆಗೂ ಪಾತ್ರವಾಯಿತು.ಪರಿ ಡೆಂಟಲ್ ಕೇರ್ ಮುಖ್ಯಸ್ಥೆ ಡಾ. ಅನುಷಾ ಆರ್.ಗುಪ್ತ ಅವರ ನೇತೃತ್ವದಲ್ಲಿ ನಡೆದ ಶಿಬಿರದ ವಿಶೇಷ ಸಾಧನೆಯು ಸೂಪರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇಂಟರ್ನ್ಯಾಷನಲ್ ದಾಖಲೆಯಲ್ಲಿ ಸ್ಥಾನ ಪಡೆಯಿತು. ಈ ಮೂಲಕ ಸಾಮಾಜಿಕ ಸೇವೆಯ ಜತೆಗೆ ವಿಶಿಷ್ಟ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಕಾರ್ಯಕ್ರಮದ್ದಾಗಿದೆ.