ಬೆಂಗಳೂರು: (5-star rating for Mahindra car) ‘ಮಹೀಂದ್ರಾ ಕಂಪನಿಯ ಎಕ್ಸ್ಇವಿ 9ಎಸ್’ ಕಾರು, ಭಾರತ್ ಎನ್ಸಿಎಪಿ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ದೇಶದ ಮೊದಲ 7 ಆಸನಗಳ ವಿದ್ಯುತ್. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪರೀಕ್ಷೆಗೊಳಗಾದ ಎಲ್ಲ 7 ಸೀಟರ್ ವಾಹನಗಳ ಪೈಕಿ ಅತ್ಯಧಿಕ ಅಂಕ ಗಳಿಸಿದ ವಾಹನ ಎಂಬ ಕೀರ್ತಿಗೂ ಪಾತ್ರವಾಗಿದೆ.ಎಕ್ಸ್ಇವಿ 9ಎಸ್’ ಕಾರು ಪ್ರಯಾಣಿಕರ ಸುರಕ್ಷತೆ ವಿಭಾಗದಲ್ಲಿ 32ಕ್ಕೆ 31.15 ಅಂಕ ಹಾಗೂ ಮಕ್ಕಳ ಸುರಕ್ಷತೆ ವಿಭಾಗದಲ್ಲಿ 49ಕ್ಕೆ 45 ಅಂಕ ಗಳಿಸಿದೆ. ಒಟ್ಟಾರೆ 76.15 ಅಂಕಗಳನ್ನು ಪಡೆದುಕೊಂಡಿದ್ದು, ಭಾರತ್ ಎನ್ಸಿಎಪಿ ಪರೀಕ್ಷೆಯಲ್ಲಿ ಇದುವರೆಗೆ ಪರೀಕ್ಷಿಸಲಾದ ಏಳು ಸೀಟರ್ ವಾಹನಗಳ ಪೈಕಿ ಅಧಿಕ ಅಂಕವಾಗಿದೆ. .