ಮುಂಬೈ: ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕಾಗಿ ಬಿಜೆಪಿ ವಿರೋಧ ಪಕ್ಷಗಳ ಸಂಸದರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿದ್ದು, ಪ್ರತಿ ಸಂಸದರಿಗೆ 150 ಕೋಟಿ ರೂಪಾಯಿ. ಹೀಗಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ವಿಳಂಬ ಮಾಡುತ್ತಿದೆ ಎಂದು ಹೇಳಿದ್ದಾರೆ.ಪ್ರಸ್ತಾವಿತ ಡಿಲಿಮಿಟೇಷನ್ ಮಸೂದೆ ಅಂಗೀಕರಿಸಲು ಸರ್ಕಾರದ ಬಳಿ ಸುಮಾರು 40 ರಿಂದ 45 ಸಂಸದರ ಸಂಖ್ಯೆ ಕಡಿಮೆಯಿದೆ. ಅದಕ್ಕಾಗಿ ಸಣ್ಣ ಪಕ್ಷಗಳ ಮೇಲೆ ಒತ್ತಡ ಹೇರುತ್ತಿದೆ. ಸ್ವಲ್ಪ ದಿನಗಳ ಹಿಂದೆ 100 ಕೋಟಿ ರೂ. ಇದ್ದ ಸಂಸದರ ಬೆಲೆ ಈಗ 150 ಕೋಟಿ ರೂ.ಗಳಿಗೆ ಏರಿದೆ. ಈ ಜವಾಬ್ದಾರಿಯನ್ನು ರಾಜ್ಯದ ಪ್ರಮುಖ ನಾಯಕರಿಗೆ ವಹಿಸಲಾಗಿದೆ ಎಂದು ಕಿಡಿಕಾರಿದ್ದಾರೆ..