ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಮತ್ತು 2047ರ ವೇಳೆಗೆ $26.5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಭಾರತೀಯ ಕೈಗಾರಿಕಾ ಒಕ್ಕೂಟ (CII) ಬ್ಯಾಂಕಿಂಗ್, ಎನ್ಬಿಎಫ್ಸಿ, ಬಂಡವಾಳ ಮಾರುಕಟ್ಟೆ, ವಿಮೆ ಮತ್ತು ಫಿನ್ಟೆಕ್ ವಲಯಗಳಲ್ಲಿ 15 ಆದ್ಯತೆಯ ಸುಧಾರಣೆಗಳನ್ನು ಪ್ರಸ್ತಾಪಿಸಿದೆ. ಆದ್ಯತಾ ವಲಯಗಳಲ್ಲಿ ಸಾಲ ಸೌಲಭ್ಯ ಹೆಚ್ಚಿಸಲು ವ್ಯವಸ್ಥೆ ಮಾಡುವುದು ಇತ್ಯಾದಿ ಶಿಫಾರಸುಗಳನ್ನು ಮಾಡಲಾಗಿದೆ. ನವದೆಹಲಿ, ನವೆಂಬರ್ 22: 2047ರ ವೇಳೆಗೆ $26.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪಲು ಸುಮಾರು $106 ಟ್ರಿಲಿಯನ್ ಹಣಕಾಸು ಸ್ವತ್ತುಗಳು ಬೇಕಾಗಬಹುದು ಎಂದು ಸಿಐಐ ಅಂದಾಜಿಸಿದೆ (ಪ್ರಸ್ತುತ ಇದು ಸುಮಾರು $7 ಟ್ರಿಲಿಯನ್ ಇದೆ). ಬ್ಯಾಂಕಿಂಗ್ ಸ್ವತ್ತುಗಳು ನಾಮಮಾತ್ರದ ಜಿಡಿಪಿಗಿಂತ (nominal GDP) 3–3.