ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬಿಎಂಟಿಸಿಗೆ ಬಿಡಿಭಾಗ ಪೂರೈಕೆ ಹೆಸರಿನಲ್ಲಿ ಅಧಿಕಾರಿಗಳು ಕೋಟ್ಯಂತರ ರೂ. ಹಣ ಲೂಟಿ ಮಾಡಿದ್ದು, ಇದೀಗ ಈ ಸಂಬಂಧ ಬಿಎಂಟಿಸಿಯ 21 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲೂಟಿಕೋರ ಅಧಿಕಾರಿಗಳ ಪಟ್ಟಿ ಇಲ್ಲಿದೆ. ಬೆಂಗಳೂರು, (ನವೆಂಬರ್ 22): ಬಿಎಂಟಿಸಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಬಿಎಂಟಿಸಿಗೆ ಬಿಡಿಭಾಗ ಪೂರೈಕೆ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗಿದೆ. ಹೌದು… 5 ಬಿಡಿಭಾಗ ಪೂರೈಕೆ ಕಂಪನಿಗಳ ಹೆಸರಿನಲ್ಲಿ 2,820 ಬಿಡಿಭಾಗ ಪೂರೈಸಿದ್ದಾಗಿ ಸುಳ್ಳು ದಾಖಲೆ ಸೃಷ್ಟಿಸಿ ಬಿಎಂಟಿಸಿಗೆ 3,97,83,142 ಕೋಟಿ ರೂ.