ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 452 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾಕ್ಕಿಂತಲೂ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳು ಭಾರತದಲ್ಲಿವೆ, ಆದರೆ ಇದರಷ್ಟು ಹೆಚ್ಚು ಲಾಭ (ಹೂಡಿಕೆಗೆ ದೊರೆತ ಲಾಭ) ಮಾಡಿದ ಇನ್ಯಾವುದೇ ಸಿನಿಮಾ ಇಲ್ಲ. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ಸಿನಿಮಾದ ಒಟಿಟಿ ಹಕ್ಕುಗಳು ಸಹ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ‘ಹನುಮಾನ್ ಅಂಶ್’ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದ ಸಿನಿಮಾ. ಕೇವಲ 2 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಅಳಿಸಲಾಗದ ದಾಖಲೆ ಬರೆದಿದೆ. ‘ಹನುಮಾನ್ ಅಂಶ್’ ಸಿನಿಮಾ ಬಿಡುಗಡೆ ಆಗಿ 110 ದಿನಗಳಿಗೂ ಹೆಚ್ಚಾಗಿದೆ.