ಸಲ್ಮಾನ್ ಖಾನ್ ಅವರು ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಈ ಪ್ರಯುಕ್ತ ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಇರುವ ಎರಡು ಪ್ರಮುಖ ಸಿನಿಮಾಗಳ ಸೀಕ್ವೆಲ್ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ವೃತ್ತಿಜೀವನದ ಎರಡು ಅತ್ಯಂತ ಜನಪ್ರಿಯ ಸಿನಿಮಾಗಳಾದ ‘ದಬಂಗ್’ ಮತ್ತು ‘ಬಜರಂಗಿ ಭಾಯಿಜಾನ್’ ಸೀಕ್ವೆಲ್ಗಳ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದಾರೆ. ಇತ್ತೀಚೆಗೆ ‘ಎಬಿಪಿ ನ್ಯೂಸ್’ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸಲ್ಮಾನ್, ಚುಲ್ಬುಲ್ ಪಾಂಡೆ ಪಾತ್ರದಲ್ಲಿ ಮತ್ತೆ ತೆರೆಯ ಮೇಲೆ ಬರುವ ಸುಳಿವು ನೀಡಿದ್ದಾರೆ.