ಬೆಳಗ್ಗಿನ ಚಿತ್ರಾನ್ನ, ಪುಳಿಯೋಗರೆ ಜತೆಗೆ ಒಂದು ಮಸಾಲೆ/ಉದ್ದಿನ ವಡೆ ತಿನ್ನೋ ಮಜಾನೇ ಬೇರೆ. ಇನ್ನು ಸಂಜೆಯಾದರೆ ಸಾಕು ಬಿಸಿ ಬಿಸಿ ಟೀ/ಕಾಫಿ ಜತೆ ಬೊಂಡಾ, ಬಜ್ಜಿ ತಿಂದರಂತು ಆಹಾ ಆ ರುಚಿಗೆ ಪಾರಾವ. ಒಂದೆರೆಡು ತಿನ್ನೋರು ಬಿಸಿ ಇದೇ ಅಂತ ಮೂರ್ನಾಲ್ಕು ಸವಿಯುವುದು ತೀರ ಸಾಮಾನ್ಯ. ಆದರೆ, ಇದನ್ನು ಪೇಪರ್ನಲ್ಲಿ ತಿನ್ನುವುದು ಮತ್ತು ಮನೆಯವರಿಗೂ ಸ್ವಲ್ಪ ಕೊಡೋಣ ಎಂದು ಪೇಪರ್ನಲ್ಲಿ ಪಾರ್ಸೆಲ್ ಕಟ್ಟಿಸಿಕೊಳ್ಳುವ ಮಂದಿಗೆ ಈ ಆಘಾತಕಾರಿ ಸುದ್ದಿ ತಿಳಿದಿರಲೇಬೇಕು.ಅಂಗಡಿಗಳಲ್ಲಿ ಇಂತಹ ಕರಿದ ತಿನಿಸುಗಳನ್ನು ಪಾರ್ಸೆಲ್ ಕೊಡುವಾಗ ಹಳೆಯ ನ್ಯೂಸ್ ಪೇಪರ್ಗಳಲ್ಲಿ ಕಟ್ಟಿಕೊಡುವುದು ಹೆಚ್ಚು.