ಮಥುರಾ: ಉತ್ತರ ಪ್ರದೇಶದ ಪವಿತ್ರ ನಗರಿ ಮಥುರಾದಲ್ಲಿ ನಡೆದ ಮದುವೆ ( Mathura Wedding ) ಸಮಾರಂಭವೊಂದು ದೇಶದ ಗಮನ ಸೆಳೆದಿದೆ. ಬಾವನೊಬ್ಬ ತನ್ನ ಇಬ್ಬರು ಬಾಮೈದರಿಗೆ ಬರೋಬ್ಬರಿ ತಲಾ 1 ಕೋಟಿ ರೂಪ. ಬಾವನೊಬ್ಬ ತನ್ನ ಇಬ್ಬರು ಬಾಮೈದರಿಗೆ ಬರೋಬ್ಬರಿ ತಲಾ 1 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಹಾರವನ್ನು ಹಾಕುವ ಮೂಲಕ ಇಡೀ ಊರಿಗೇ ಅಚ್ಚರಿ ಮೂಡಿಸಿದ್ದಾನೆ. ಮದುವೆಯ ಸಂಪ್ರದಾಯವಾದ 'ಘುಡ್ಚಡಿ' (ಕುದುರೆ ಸವಾರಿ) ಮೆರವಣಿಗೆಯ ವೇಳೆ ಈ ದುಬಾರಿ ಮತ್ತು ವಿಶೇಷ ಉಡುಗೊರೆಯನ್ನು ನೀಡಲಾಗಿದ್ದು, ಸದ್ಯ ಈ ಅದ್ಧೂರಿ ಮದುವೆ ಇಡೀ ಉತ್ತರ ಪ್ರದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.