ಶಿವಮೊಗ್ಗ: ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿಯ ( Newlyweds ) ದುರಂತ ಸಾವಿಗೀಡಾಗಿದ್ದಾರೆ. ನಗರದ ಶರಾವತಿ ನಗರದ ನಿವಾಸಿಗಳಾ. ಕಿರಣ್ (28) ಹಾಗೂ ಸೌಮ್ಯ (22) ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕಿರಣ್, ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಸೌಮ್ಯ ಅವರನ್ನು ವಿವಾಹವಾಗಿದ್ದರು. ಹೊಸ ಜೀವನದ ನೂರಾರು ಕನಸುಗಳನ್ನು ಕಟ್ಟಿಕೊಂಡು, ಸಂಸಾರದ ನೌಕೆಯನ್ನು ಸುಂದರವಾಗಿ ಮುನ್ನಡೆಸಬೇಕಿದ್ದ ಈ ಜೋಡಿಯ ಪಯಣ ಅರ್ಧದಲ್ಲೇ ದುರಂತ ಅಂತ್ಯ ಕಂಡಿರುವುದು ನಿಜಕ್ಕೂ ಕರುಣಾಜನಕವಾಗಿದೆ..