ಶಿವಮೊಗ್ಗ: ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತಪಟಿದ್ದಾರೆ. ಶರಾವತಿ ನಗರದ ಜಿ.ಕಿರಣ್ (28) ಹಾಗೂ ಸೌಮ್ಯ (22). ಶರಾವತಿ ನಗರದ ಜಿ.ಕಿರಣ್ (28) ಹಾಗೂ ಸೌಮ್ಯ (22) ಮೃತ ದಂಪತಿ. ಕಿರಣ್ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಕಾರ್ಮಿಕನಾಗಿದ್ದು, ಕಿರಣ್ ಮತ್ತು ಸೌಮ್ಯ ಮದುವೆಯಾಗಿ ಕೇವಲ ಒಂದೂವರೆ ತಿಂಗಳು ಕಳೆದಿತ್ತು. ಶರಾವತಿನಗರದ ಮನೆಯಿಂದ ಪತ್ನಿ ಸೌಮ್ಯ ಅವರ ತವರು ಮನೆಯಾದ ಗೋವಿಂದಪುರಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಸಾಗರ ರಸ್ತೆ ಬಳಿಯ ರಿಂಗ್ ರಸ್ತೆಯಲ್ಲಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತವಾಗಿದೆ.