ಮುಂಬೈ: ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಶಿಸ್ತಿನಿಂದ ವರ್ತಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳನ್ನು ಗೌರವಿಸಬೇಕು ಎಂದು ಮುಂಬೈ ಮೇಯರ್ ರಿತು ತಾವ್ಡೆ ಹೇಳಿದ್ದಾರೆ. ಕುರ್ಲಾದ ಉದ್ಯಾನದಲ್ಲಿ ಯುವ. ಕುರ್ಲಾದ ಉದ್ಯಾನದಲ್ಲಿ ಯುವ ಜೋಡಿಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಘಟನೆಯ ಕುರಿತು ಮುಂಬೈ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.ಸಾರ್ವಜನಿಕ ಸ್ಥಳ ಎಲ್ಲರಿಗೂ ಸೇರಿದ್ದುಕುರ್ಲಾ ಪಶ್ಚಿಮದ ಫೀನಿಕ್ಸ್ ಮಾರ್ಕೆಟ್ಸಿಟಿ ಮಾಲ್ ಸಮೀಪದಲ್ಲಿರುವ ಪ್ರಮೋದ್ ಮಹಾಜನ್ ಉದ್ಯಾನದಲ್ಲಿ ಯುವ ಜೋಡಿಯ ಮೇಲೆ ಹಲ್ಲೆ ನಡೆದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.