Footpath Video: ಫುಟ್ಪಾತ್ ಇರುವುದು ಪಾದಚಾರಿಗಳಿಗಾಗಿ. ಆದರೆ ಕೆಲ ವಾಹನ ಸವಾರರು ಟ್ರಾಫಿಕ್ನಿಂದ ತಪ್ಪಿಸಿಕೊಳ್ಳಲು ಫುಟ್ಪಾತ್ನಲ್ಲೇ ಬೈಕ್ ಓಡಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇಂತಹ. ಇಂತಹ ಸವಾರರಿಗೆ ಮೂವರು ಯುವತಿಯರು ತಮ್ಮದೇ ರೀತಿಯಲ್ಲಿ ಪಾಠ ಕಲಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ವೈರಲ್ ವಿಡಿಯೋದಲ್ಲಿ ಮೂವರು ಯುವತಿಯರು ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಹಿಂದಿನಿಂದ ಹಲವು ಬೈಕ್ ಸವಾರರು ಅದೇ ಫುಟ್ಪಾತ್ನಲ್ಲಿ ಬರುತ್ತಾರೆ. ಯುವತಿಯರು ದಾರಿ ಬಿಡಲಿ ಎಂಬ ಉದ್ದೇಶದಿಂದ ಸವಾರರು ಪದೇಪದೆ ಹಾರ್ನ್ ಮಾಡುತ್ತಾರೆ. ಆದರೆ ಯುವತಿಯರು ಮಾತ್ರ ಹಾರ್ನ್ಗೆ ಕ್ಯಾರೇ ಎನ್ನದೆ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಾರೆ. ಫುಟ್ಪಾತ್ನಿಂದ ಕೆಳಗಿಳಿದು ದಾರಿ ಮಾಡಿಕೊಡಲು ನಿರಾಕರಿಸುತ್ತಾರೆ.