ನಟಿ ಸಮಂತಾ ರುತ್ ಪ್ರಭು ಹಾಗೂ ನಿರ್ದೇಶಕ ರಾಜ್ ನಿಡಿಮೋರು ಅವರ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಈ ದಂಪತಿಗೆ ಗಂಡು ಮಗು ಜನಿಸಿದ್ದು, ದೇವ್ ನಿಡಿಮೋರು ಎಂದು ಹೆಸರು ಇಡಲಾಗಿದೆ. ಮಗುವಿನ ಶ್ರೇಯಸ್ಸಿಗಾಗಿ ದೇವಸ್ಥಾನ, ಚರ್ಚ್ ಮತ್ತು ದರ್ಗಾದಲ್ಲಿ ಪ್ರಾರ್ಥನೆ ಮಾಡಲಾಗಿದೆ. ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ದಂಪತಿ ಇತ್ತೀಚೆಗಷ್ಟೇ ತಮಗೆ ಮೊದಲ ಮಗು ಜನಿಸಿದ ಸುದ್ದಿಯನ್ನು ಹಂಚಿಕೊಂಡರು. ಸಮಂತಾ ಅವರು ನವೆಂಬರ್ 19ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ದೇವ್ ನಿಡಿಮೋರು ಎಂದು ನಾಮಕರಣ ಮಾಡಿದ್ದಾರೆ.