ಮನೆ ಮುಖ್ಯ ದ್ವಾರವು ಸಕಾರಾತ್ಮಕ ಶಕ್ತಿಯ ಪ್ರವೇಶ ದ್ವಾರ. ವಾಸ್ತು ಪ್ರಕಾರ, ಕೆಲವು ವಸ್ತುಗಳನ್ನು ಬಾಗಿಲಿನ ಮುಂದೆ ಇಡುವುದು ನಕಾರಾತ್ಮಕ ಶಕ್ತಿ ತರಬಹುದು. ಕಸದ ಬುಟ್ಟಿ, ಮುರಿದ ವಸ್ತುಗಳು, ಮುಳ್ಳಿನ ಗಿಡಗಳು, ಚಪ್ಪಲಿ ಮುಂತಾದವುಗಳನ್ನು ದೂರವಿಡಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ, ನೆಮ್ಮದಿ ನೆಲೆಸುತ್ತದೆ. ಶುಚಿತ್ವ ಮತ್ತು ಅಚ್ಚುಕಟ್ಟುತನ ಕಾಪಾಡುವುದು ಮುಖ್ಯ. ಮನೆ ಎಂದರೆ ಕೇವಲ ನಾಲ್ಕು ಗೋಡೆಗಳಿಂದ ನಿರ್ಮಾಣವಾದ ಕಟ್ಟಡವಲ್ಲ. ಅದು ಪ್ರತಿಯೊಬ್ಬರ ನೆಮ್ಮದಿ, ಸಂತೋಷ ಮತ್ತು ಸುಖ-ಸಮೃದ್ಧಿಯ ನೆಲೆಯಾಗಿದೆ. ಹೀಗಾಗಿ ಮನೆಯ ಪ್ರತಿಯೊಂದು ಭಾಗಕ್ಕೂ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಅದರಲ್ಲೂ ಮನೆಯ ಮುಖ್ಯ ಬಾಗಿಲನ್ನು ಅತ್ಯಂತ ಪ್ರಮುಖ ಸ್ಥಳವೆಂದು ಪರಿಗಣಿಸಲಾಗುತ್ತದೆ.