ಆ್ಯಂಟಿಬಯೋಟಿಕ್ಗಳ ಅತಿಯಾದ ಬಳಕೆಯಿಂದ ಹೆಚ್ಚುತ್ತಿರುವ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಅಪಾಯ ತಡೆಗೆ ಕರ್ನಾಟಕ ಆರೋಗ್ಯ ಇಲಾಖೆ ಹೊಸ ಕಾರ್ಯಯೋಜನೆ ಜಾರಿಗೊಳಿಸಿದೆ. KSAPCAR ಹೆಸರಿನ ಈ ಯೋಜನೆಯಲ್ಲಿ ಆ್ಯಂಟಿಬಯೋಟಿಕ್ ದುರ್ಬಳಕೆ ನಿಯಂತ್ರಣ, ರೋಗಗಳ ಮೇಲ್ವಿಚಾರಣೆ ಮತ್ತು ಆಸ್ಪತ್ರೆಗಳಲ್ಲಿ ಸೋಂಕು ತಡೆ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ಬೆಂಗಳೂರು, ನವೆಂಬರ್ 22: ಆ್ಯಂಟಿಬಯೋಟಿಕ್ಗಳ ಅತಿಯಾದ ಮತ್ತು ಅನಗತ್ಯ ಬಳಕೆಯಿಂದ ಹೆಚ್ಚುತ್ತಿರುವ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR) ಅಪಾಯವನ್ನು ನಿಯಂತ್ರಿಸಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ರೋಗಗಳ ಮೇಲ್ವಿಚಾರಣೆ ಬಲಪಡಿಸುವುದು, ಆರೋಗ್ಯ ಕೇಂದ್ರಗಳಲ್ಲಿ ಸೋಂಕು ನಿಯಂತ್ರಣ ಕ್ರಮಗಳನ್ನು ಸುಧಾರಿಸುವುದು ಹಾಗೂ ಆ್ಯಂಟಿಬಯೋಟಿಕ್ಗಳ ದುರ್ಬಳಕೆಗೆ ಕಡಿವಾಣ ಹಾಕುವುದಕ್ಕೆ ಆದ್ಯತೆ ನೀಡಿ ರಾಜ್ಯಮಟ್ಟದ ಕಾರ್ಯಯೋಜನೆ ರೂಪಿಸಿದೆ.