ಶಬರಿಮಲೆ ಅಯ್ಯಪ್ಪ ಸ್ವಾಮಿ ಯಾತ್ರಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಮಂಡಲ-ಮಕರವಿಳಕ್ಕು ಯಾತ್ರೆಗೆ 'ಇರುಮುಡಿ ಕಟ್ಟು' ವಿಮಾನದ ಕ್ಯಾಬಿನ್ನಲ್ಲಿ ಕೊಂಡೊಯ್ಯಲು ಸತತ ಮೂರನೇ ವರ್ಷವೂ ಅನುಮತಿ ನೀಡಲಾಗಿದೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ, ಭದ್ರತಾ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ವಿಮಾನ ಪ್ರಯಾಣದ ಸಡಿಲಿಕೆಯ ಜೊತೆಗೆ, ಕೇರಳ ಸರ್ಕಾರ ಮತ್ತು ದೇವಸ್ಥಾನ ಮಂಡಳಿ ಜಾರಿಗೆ ತಂದಿರುವ ಪ್ರಮುಖ ನಿಯಮಗಳನ್ನು ಭಕ್ತರು ಪಾಲಿಸುವುದು ಕಡ್ಡಾಯವಾಗಿದೆ.