ಲಖನೌ: ವೈಯಕ್ತಿಕ ಜೀವನದ ದುಃಖದ ನಡುವೆಯೂ ಸಾರ್ವಜನಿಕ ಜವಾಬ್ದಾರಿಗಳಿಗೆ ಮೊದಲ ಆದ್ಯತೆ ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಕೆಲ. ಹರಿದ್ವಾರದಲ್ಲಿ ತಮ್ಮ ತಾಯಿ ಸಾವಿತ್ರಿ ದೇವಿ ಅವರ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಯೋಗಿ ಆದಿತ್ಯನಾಥ್, ಶನಿವಾರ ಸಂಜೆ ಲಖನೌದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದ 5ನೇ ಕೌಶಲ ದೀಕ್ಷಾಂತ ಸಮಾರಂಭದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಖಾತೆ) ಜಯಂತ್ ಚೌಧರಿ ಅವರು ಮುಖ್ಯಮಂತ್ರಿಗಳ ಉಪಸ್ಥಿತಿಯನ್ನು ವಿಶೇಷವಾಗಿ ಸ್ಮರಿಸಿ, ಅವರ ಕರ್ತವ್ಯಪ್ರಜ್ಞೆಯನ್ನು ಕೊಂಡಾಡಿದರು.