ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಜಗಳ ಗಲಾಟೆಗಳು ನಡೆದವು. ಕೆಲವರು ಗಡಿ ಮೀರಿ ಕೆಲವರ ಮೇಲೆ ಹರಿಹಾಯ್ದರು. ಅದರಲ್ಲಿ ಮಾಡರ್ನ್ ಕವಿ ಮಂಜ ಮತ್ತು ಗಾನವಿ ಪ್ರಮುಖರು. ಮಂಜ, ಜಗದೀಶ್ ಅವರನ್ನು ಉದ್ದೇಶಿಸಿ ‘ನೀನು ಗಂಡಸಲ್ಲ’ ಎಂದು, ‘ಮುಸುರೆ ತಿಕ್ಕಿ ಬಂದಿದ್ದೀಯ’ ಎಂದು ತೀರಾ ಕೀಳಾಗಿ ಮಾತನಾಡಿದ್ದರು. ಅದಕ್ಕೆ ಜಗದೀಶ್ ಬಹಳ ಬೇಸರ ಪಟ್ಟುಕೊಂಡಿದ್ದರು. ಇದೀಗ ಶನಿವಾರ ಬಂದಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ಎಲ್ಲ ವಿಷಯಗಳ ಚರ್ಚೆ ನಡೆಯುತ್ತಿದೆ.