ಯಲ್ಲಮ್ಮ ದೇವಸ್ಥಾನದ ಕುರಿತ ಸರ್ಪ ದೋಷ ವದಂತಿಯಿಂದ ಸಾವಿರಾರು ಮಹಿಳೆಯರು ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಬಟ್ಟೆ ಹಾಗೂ ಪೂಜಾ ಸಾಮಗ್ರಿಗಳನ್ನು ಎಸೆದು ನದಿಯನ್ನು ಕಲುಷಿತಗೊಳಿಸಿದ್ದಾರೆ. ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ, 25 ಲೋಡ್ ಕಸ ತೆಗೆದರೂ ಸಮಸ್ಯೆ ಮುಂದುವರಿದಿದೆ. ಬರಗಾಲದ ಸಂದರ್ಭದಲ್ಲಿ ನದಿಯನ್ನು ಉಳಿಸಿಕೊಳ್ಳಲು ಆಡಳಿತದ ಕ್ರಮ ಅನಿವಾರ್ಯ. ಯಾದಗಿರಿ, ನವೆಂಬರ್ 21: ಜಿಲ್ಲೆಯ ಜೀವನಾಡಿ ಭೀಮಾ ನದಿ, ಯಲ್ಲಮ್ಮ ದೇವಸ್ಥಾನದ ಕುರಿತಾದ ವದಂತಿಯ ಪರಿಣಾಮವಾಗಿ ತೀವ್ರ ಮಾಲಿನ್ಯಕ್ಕೆ ಒಳಗಾಗಿದೆ. ಬೆಳಗಾವಿಯ ಸವದತ್ತಿಯಲ್ಲಿರುವ ಯಲ್ಲಮ್ಮ ಪಾದುಕೆಯನ್ನು ಸರ್ಪ ನುಂಗಿದೆ ಎಂಬ ವದಂತಿ ಹಬ್ಬಿದ ಕಾರಣ, ಸಾವಿರಾರು ಮಹಿಳೆಯರು ಯಾದಗಿರಿಯ ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.