ಕಿಚ್ಚ ಸುದೀಪ್ ಮಾಲೀಕತ್ವದ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ತಂಡದ ವುಲ್ಫ್ ಜಿಬಿ08 ರೇಸ್ ಕಾರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಗಮನ ಸೆಳೆದಿದೆ. ಕಾರನ್ನು ನೋಡಿ ಖುಷಿಪಟ್ಟ ಸ್ಪರ್ಧಿಗಳು, ದೆಹಲಿ ಹಾಗೂ ಮುಂಬೈನಲ್ಲಿ ನಡೆಯಲಿರುವ ಮುಂಬರುವ ರೇಸ್ಗಳಿಗೆ ಸುದೀಪ್ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿ ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್ ಅವರ ಒಡೆತನದ ಮೋಟಾರ್ ಸ್ಪೋರ್ಟ್ಸ್ ತಂಡವಾದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಅಧಿಕೃತ ರೇಸ್ ಕಾರು ಈಗ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಗಮನ ಸೆಳೆದಿದೆ.