ನ್ಯೂಜಿಲೆಂಡ್ ವಿರುದ್ಧ 98 ರನ್ ಗಳಿಸಿ ಶತಕ ವಂಚಿತರಾದ ಶುಭ್ಮನ್ ಗಿಲ್, 90ರ ಗಡಿಯಲ್ಲಿ ಔಟಾದ ಭಾರತೀಯ ನಾಯಕರ ಪಟ್ಟಿಗೆ ಸೇರಿದ್ದಾರೆ. ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಕೂಡ ಇದೇ ರೀತಿ 98 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಈ ಪಟ್ಟಿಯಲ್ಲಿ ಸಚಿನ್, ಕೊಹ್ಲಿ, ಗಂಗೂಲಿ ಸೇರಿದಂತೆ ಹಲವು ದಿಗ್ಗಜರೂ ಇದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಶತಕದ ಅಂಚಿನಲ್ಲಿ ವಿಕೆಟ್ ಕಳೆದುಕೊಂಡ ನಾಯಕರ ದುರದೃಷ್ಟದ ಇತಿಹಾಸ ಇದು.