ಬಿಗ್ ಬಾಸ್ ಕನ್ನಡ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿರಣ್ ಶಾಸ್ತ್ರಿ ಆಟಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ನಿರ್ಧಾರ ಬದಲಿಸುವಂತೆ ಸ್ಟ್ಯಾಂಡ್ ತೆಗೆದುಕೊಂಡ ಕಿರಣ್ ಅವರಿಗೆ ಕಿಚ್ಚನ ಚಪ್ಪಾಳೆ, ವಿಶೇಷ ಜಾಕೆಟ್ ಹಾಗೂ ಫೋಟೋ ಫ್ರೇಮ್ ಉಡುಗೊರೆ ನೀಡಿ ಗೌರವಿಸಲಾಗಿದೆ. ಈ ಸಂಚಿಕೆ ಇಂದು ರಾತ್ರಿ 9ಕ್ಕೆ ಪ್ರಸಾರವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13ರ ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿ ಕಿರಣ್ ಶಾಸ್ತ್ರಿ ಅವರ ಆಟಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ವಯಸ್ಸಿನಲ್ಲಿ ಕಿರಿಯವರಾದರೂ ಕಿರಣ್ ಶಾಸ್ತ್ರಿ ಅವರ ತಿಳುವಳಿಕೆ ಮತ್ತು ವಿಚಾರಗ್ರಹಣ ಶಕ್ತಿ ಎಲ್ಲರಿಗಿಂತಲೂ ಜೋರಾಗಿದೆ ಎಂದು ನಿರೂಪಕ ಕಿಚ್ಚ ಸುದೀಪ್ ಶ್ಲಾಘಿಸಿದ್ದಾರೆ.