ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಎಲ್ಪಿಜಿ ಬಿಕ್ಕಟ್ಟು ನಿವಾರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪಿಎನ್ಜಿ ಸಂಪರ್ಕ ವಿಸ್ತರಣೆಗೆ ಪ್ಲಂಬರ್ಗಳ ಕೊರತೆ ಎದುರಾಗಿದ್ದು, ಐಟಿಐ ವಿದ್ಯಾರ್ಥಿಗಳ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ದೇಶದ ಭವಿಷ್ಯಕ್ಕೆ ಐಐಟಿ ಹಾಗೂ ಐಟಿಐ ಸಮಾನ ಎಂದು ಮೋದಿ ತಿಳಿಸಿದ್ದು, ವೃತ್ತಿಪರ ಕೌಶಲ್ಯ ಮತ್ತು ತರಬೇತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಪಿಎಂ-ಸೇತು ಯೋಜನೆಯಡಿ ಐಟಿಐಗಳ ಆಧುನೀಕರಣ ನಡೆಯುತ್ತಿದೆ. ನವದೆಹಲಿ, ನವೆಂಬರ್ 21: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾದರೂ, ದೇಶದಲ್ಲಿ ದೊಡ್ಡ ಮಟ್ಟದ ಅನಿಲ ಬಿಕ್ಕಟ್ಟು ಉಂಟಾಗದಂತೆ ನೋಡಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.