ಅಮರಾವತಿ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಅವರ ತಂಗಿ, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ನಡುವಿನ ಕೌಟುಂಬಿಕ ಕಲಹ ಮತ್ತೊಮ್ಮೆ ಬಹಿರಂಗವಾಗಿದೆ. ಶರ್ಮಿಳಾ ಅವರ ಮಗಳ ಮದುವೆ ವೇದಿಕೆಯ ವಿಚಾರವಾಗಿ ಅಣ್ಣ-ತಂಗಿಯ ನಡುವೆ ವಿವಾದ ಭುಗಿಲೆದ್ದಿದೆ. ಶರ್ಮಿಳಾ ಅವರ ಪುತ್ರಿ ಅಂಜಿಲಿ ಅವರ ವಿವಾಹವು ನ.25ರಂದು ನಿಗದಿಯಾಗಿದ್ದು, ಈ ಮದುವೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿರುವ ಜಗನ್ ಮೋಹನ್ ರೆಡ್ಡಿ ಹಾಗೂ ತಮ್ಮ ಜಂಟಿ ಒಡೆತನದಲ್ಲಿರುವ ‘ಯಲಹಂಕ ಪ್ಯಾಲೇಸ್’ನಲ್ಲಿ ನಡೆಸಲು ಶರ್ಮಿಳಾ ತೀರ್ಮಾನಿಸಿದ್ದರು. ಆದರೆ, ಭದ್ರತಾ ಕಾರಣಗಳನ್ನು ಮುಂದಿಟ್ಟು ಜಗನ್ ತಮ್ಮ ಮನೆಯನ್ನು ಮದುವೆಗೆ ನೀಡಲು ನಿರಾಕರಿಸಿದ್ದಾರೆ.