* ಡಾ. ನಿ.ಬೀ.ವಿಜಯ ಬಲ್ಲಾಳ ಅಭಿಪ್ರಾಯ* 'ಅಂಬಾತನಯ ಮುದ್ರಾಡಿ' ಪ್ರಶಸ್ತಿ ಪ್ರದಾನಉಡುಪಿ: ರಂಗಭೂಮಿ ಕಲೆಗೆ ಪ್ರಾಚೀನ ಇತಿಹಾಸವಿದೆ. ನಾಟಕಗಳ ಮೂಲಕವೇ ಜನರಿಗೆ ಯಾವುದು ಸರಿ? ಯಾವುದು ತಪ್ಪು ಎಂಬ ಕ. ಯಾವುದು ತಪ್ಪು ಎಂಬ ಕಲ್ಪನೆ ಮೂಡುವಂತೆ ಮಾಡಿ ಹಿಂದಿನ ಕಾಲದಲ್ಲೇ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡುತ್ತಿತ್ತು. ಇತ್ತೀಚೆಗೆ ಆಧುನಿಕ ಕಲೆಗಳ ಭರಾಟೆಯಿಂದ ರಂಗಭೂಮಿ ಕಳೆಗುಂದಿದ್ದು, ಈ ಕ್ಷೇತ್ರಕ್ಕೆ ಸೂಕ್ತ ಉತ್ತೇಜನ, ಪೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದು ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ ಅಭಿಪ್ರಾಯಪಟ್ಟರು.