* ತೇರನ್ನೇರಿದ ಉತ್ಸವಮೂರ್ತಿ* ರಥೋತ್ಸವಕ್ಕೆ ಶೀರೂರು ವೇದವರ್ಧನ ಶ್ರೀ ಚಾಲನೆ ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶನಿವಾರ (ನ.21)ದಿಂದ ಲಕ್ಷದಿಪೋತ್ಸವ ಪ್ರಾರಂಭವಾಗಿದ್ದು, ನ.24ರ ವರೆಗೆ ನಡೆಯಲಿದೆ. ತನ್ನಿಮಿತ್ತ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ವಾರ್ಷಿಕ ರಥೋತ್ಸವಗಳಿಗೆ ಚಾಲನೆ ನೀಡಿದರು.ಹಣತೆ ಮುಹೂರ್ತಶ್ರೀಕೃಷ್ಣ ಮಠದ ಒಳ ಹಾಗೂ ಹೊರ ಪ್ರಾಂಗಣದಲ್ಲಿ ಹಣತೆಗಳನ್ನು ಬೆಳಗಲು ಅಡಿಕೆ ಮರದ ಪಟ್ಟಿಯಿಂದ ಸಾಲು ರಚಿಸಲಾಗಿದೆ. ಸಾಯಂಕಾಲ ಪರ್ಯಾಯ ವೇದವರ್ಧನ ಶ್ರೀಗಳು ಹಣತೆಗಳನ್ನು ಸಾಲಿನಲ್ಲಿ ಇಟ್ಟು ಎಣ್ಣೆ ಹಾಕುವ ಮೂಲಕ ಹಣತೆ ಮುಹೂರ್ತ ನೆರವೇರಿಸಿ ದೀಪೋತ್ಸಕ್ಕೆ ಚಾಲನೆ ನೀಡಿದರು. ಕೃಷ್ಣಾಪುರ ಮಠದ ವಿದ್ಯಾಸಾಗರ ಶ್ರೀ, ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀಗಳೂ ಸಹ ಹಣತೆಯನ್ನು ಜೋಡಿಸಿ ಗಮನ ಸೆಳೆದರು..