ಪ್ರಪಂಚದಾದ್ಯಂತ ಎಲ್ಲರಿಗೂ ಶನಿವಾರ-ಭಾನುವಾರ ವೀಕೆಂಡ್ ರಜೆ ಇರುವುದಿಲ್ಲ: ಯಾವ ದೇಶಗಳಲ್ಲಿ ಯಾವ ದಿನ ರಜೆ ಇರುತ್ತೆ ಗೊತ್ತಾ. ಸಾಮಾನ್ಯವಾಗಿ ನಮ್ಮ ಭಾರತದವರಿಗೆ ವಾರಾಂತ್ಯ ಅಥವಾ ವೀಕೆಂಡ್ ಎಂದರೆ ನಮಗೆ ಥಟ್ಟನೆ ನೆನಪಾಗುವುದು ಶನಿವಾರ ಮತ್ತು ಭಾನುವಾರ. ಸೋಮವಾರದಿಂದ ಶುಕ್ರವಾರದವರೆಗೆ ಆಫೀಸ್ಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿ, ಶನಿವಾರ ಮತ್ತು ಭಾನುವಾರ ವಿಶ್ರಾಂತಿ ಪಡೆಯುವುದು ಬಹುತೇಕರ ದಿನಚರಿ. ಆದರೆ, ಪ್ರಪಂಚದಾದ್ಯಂತ ಇದೇ ನಿಯಮ ಜಾರಿಯಲ್ಲಿದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ವಿಶ್ವದ ಹಲವು ದೇಶಗಳಲ್ಲಿ ಭಾನುವಾರ ಸಾಮಾನ್ಯ.