ಬಸ್ ಸಂಚಾರದಲ್ಲಿ ಇನ್ಮುಂದೆ ವ್ಯತ್ಯಯವಿಲ್ಲ: ಸಂಕಷ್ಟದಲ್ಲಿರುವ 4 ಸಾರಿಗೆ ನಿಗಮಗಳಿಗೆ 593 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ. ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಎದುರಿಸುತ್ತಿದ್ದ ಡೀಸೆಲ್ ಕೊರತೆ ಹಾಗೂ ಆರ್ಥಿಕ ಸಮಸ್ಯೆಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯಿಟ್ಟಿದೆ. ಡೀಸೆಲ್ ಸಹಾಯಧನ, ವಿದ್ಯಾರ್ಥಿಗಳ ರಿಯಾಯಿತಿ ದರದ ಬಸ್ ಪಾಸ್ ಬಾಕಿ ಹಾಗೂ ಜನಪ್ರಿಯ ಶಕ್ತಿ ಯೋಜನೆಯ ಸಹಾಯಧನ ಸೇರಿದಂತೆ ಒಟ್ಟು 593.99 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದಾಗಿ.