ಭಾರತದಲ್ಲಿ ಶೇ. 50ರಷ್ಟು ಬಾಲ್ಯ ವಿವಾಹಗಳು ಈ 5 ರಾಜ್ಯಗಳಲ್ಲೇ ನಡೆಯುತ್ತಿವೆ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ UNICEF ವರದಿ. ಭಾರತದಲ್ಲಿ 2030ರ ವೇಳೆಗೆ ಬಾಲ್ಯ ವಿವಾಹವನ್ನ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನ ಹೊಂದಲಾಗಿದೆ. 1996ರಲ್ಲಿ ಶೇ. 50ರಷ್ಟಿದ್ದ ಬಾಲ್ಯ ವಿವಾಹ ಪ್ರಕರಣಗಳು ಪ್ರಸ್ತುತ ಶೇ. 20ರ ಆಸುಪಾಸಿಗೆ ಇಳಿಕೆಯಾಗಿವೆ. ಇದು ಉತ್ತಮ ಬೆಳವಣಿಗೆಯಾಗಿದ್ದರೂ ಕೂಡ, ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ಪ್ರತಿ ಮೂವರು ಬಾಲ್ಯ ವಿವಾಹಕ್ಕೊಳಗಾದವರಲ್ಲಿ ಒಬ್ಬರು ಭಾರತೀಯರು ಎಂಬುದು ಆತಂಕಕಾರಿ ವಿಷಯ. ಇಂದಿಗೂ ಪ್ರತಿ ಐವರು ಯುವತಿಯರಲ್ಲಿ.