ಮನೆಯಲ್ಲಿ ಮಲಗಿದ್ದಾಗಲೇ ಅಪಹರಿಸಿದ್ದರು: ದೆಹಲಿ ಪೊಲೀಸರ ವಿರುದ್ಧ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಗಂಭೀರ ಆರೋಪ. ಜಂತರ್ ಮಂತರ್ನಲ್ಲಿ ಆಯೋಜಿಸಲಾಗಿದ್ದ 'ಜಂತರ್ ಮಂತರ್ 2.0' ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ (ಅಕ್ಟೋಬರ್ 10) ವಶಪಡಿಸಿಕೊಂಡಿದ್ದರು. ಗುರುಗ್ರಾಮ್ನಲ್ಲಿರುವ ಅವರ ನಿವಾಸದಿಂದಲೇ ಬಂಧಿಸಿ ಕರೆದೊಯ್ದಿದ್ದರು. ಭಾನುವಾರ (ಅಕ್ಟೋಬರ್ 11) ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಧ್ರುವ್ ರಾಠಿ ಅವರನ್ನು ಬಿಡುಗಡೆ ಮಾಡಲಾಯಿತು. ಜೈಲಿನಿಂದ ಹೊರಬಂದ.