ಅಡುಗೆಮನೆಯು ಪ್ರತಿಯೊಂದು ಮನೆಯ ಪ್ರಮುಖ ಭಾಗವಾಗಿದೆ. ಅದರ ಶುಚಿತ್ವ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದುಬಹಳ ಮುಖ್ಯ. ಆದರೆ ಕೆಲವೊಮ್ಮೆ, ಅಡುಗೆಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರೂ ಸಹ ಸಿಂಕ್ನಿಂದ ಕೆಟ್ಟ ವಾಸನೆ ಬರುತ್ತದೆ. ಈ ಅಹಿತಕರ ವಾಸನೆಯು ಇಡೀ ವಾತಾವರಣವನ್ನು ಹಾಳುಮಾಡುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ದುಬಾರಿ ಕ್ಲೀನರ್ಗಳು ಬೇಕಿಲ್ಲ. ನಿಂಬೆಹಣ್ಣಿನ ಸಹಾಯದಿಂದ ಈ ಸಮಸ್ಯೆಗೆ ಸಂಪೂರ್ಣವಾಗಿ ಮುಕ್ತಿ ಪಡೆಯಬಹುದು. ಶುಚಿತ್ವ, ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ತಮ್ಮ ಮನೆಯ ಅಡುಗೆಕೋಣೆಯ (kitchen) ಸ್ವಚ್ಛತೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುತ್ತಾರೆ. ಎಷ್ಟೇ ಕ್ಲೀನ್ ಮಾಡಿದ್ರೂ ಸಹ ಕೆಲವೊಮ್ಮೆ ಅಡುಗೆಮನೆಯ ಸಿಂಕ್ನಿಂದ ದುರ್ವಾಸನೆ ಬರಲು ಆರಂಭಿಸುತ್ತದೆ.