ಇತ್ತೀಚೆಗಷ್ಟೆ ಆಶಾ ಕಾರ್ಯಕರ್ತೆಯರೊಟ್ಟಿಗೆ ಸರ್ಕಾರದ ಪ್ರತಿನಿಧಿಗಳು ಸಂವಾದ ನಡೆಸಿ ಭರವಸೆಗಳನ್ನು ನೀಡಿದ್ದರಾದರೂ ಪ್ರತಿಭಟನೆಯಿಂದ ಕಾರ್ಯಕರ್ತೆಯರು ಹಿಂದೆ ಸರಿದಿಲ್ಲ, ಲಿಖಿತ ಆದೇಶದ ಒತ್ತಾಯ ಮಾಡಿದ್ದಾರೆ. ಹಲವು ಸಂಘಟನೆಗಳು ಪ್ರತಿಭಟನಾ ನಿರತ ಕಾರ್ಯಕರ್ತೆಯರಿಗೆ ಬೆಂಬಲ ನೀಡಿವೆ. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಆಶಾ ಕಾರ್ಯಕರ್ತೆಯರ ಪರವಾಗಿ ದನಿ ಎತ್ತಿದ್ದಾರೆ. ಗೌರವ ಧನ ಹೆಚ್ಚಳ ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ನಟಿ ರಮ್ಯಾ, ‘ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರು ಮೂಲವೇತನ ಕೇಳುತ್ತಿದ್ದಾರೆ ಅಷ್ಟೆ. ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿಯ ಬೆನ್ನೆಲುಬು.