ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಸದ್ಯ ತಮ್ಮ ಮುಂಬರುವ ಸಿನಿಮಾ ‘ರಣಬಾಲಿ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮದುವೆಯಾಗಿರುವ ಈ ಜೋಡಿ ಸಿನಿಮಾ ಪ್ರಮೋಷನ್ಗಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಅವರ ನಡುವಿನ ಮಾತುಕತೆ ಹಾಗೂ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಸುಧೀರ್ ಶ್ರೀನಿವಾಸನ್ ಅವರ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ವಾರ್ಷಿಕೋತ್ಸವ, ತಿಂಗಳ ಸಂಭ್ರಮ ಸೇರಿದಂತೆ ವಿಶೇಷ ದಿನಗಳನ್ನು ಆಚರಿಸುವ ವಿಚಾರದಲ್ಲಿ ಇಬ್ಬರ ಅಭಿಪ್ರಾಯ ಹೇಗೆ ಭಿನ್ನವಾಗಿದೆ ಎಂಬುದನ್ನು ರಶ್ಮಿಕಾ ಬಹಿರಂಗಪಡಿಸಿದ್ದಾರೆ. ವಿಶೇಷ ದಿನಗಳನ್ನು ಆಚರಿಸುವ ವಿಚಾರದಲ್ಲಿ ವಿಜಯ್ ಹೇಗೆ?