ನ್ಯೂಜಿಲೆಂಡ್ ನೆಲದಲ್ಲಿ ಅಮೋಘ ಶತಕ ಸಿಡಿಸಿ ಕೆಎಲ್ ರಾಹುಲ್ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಬಳಿಕ ನ್ಯೂಜಿಲೆಂಡ್ನಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಕೇವಲ 5 ರನ್ ಗಳಿಸಿದ್ದಾಗ ಗ್ಲೆನ್ ಫಿಲಿಪ್ಸ್ ಸಲಹೆಯಿಂದ ಡಿಆರ್ಎಸ್ನಿಂದ ಪಾರಾಗಿ ರಾಹುಲ್ ಈ ಶತಕ ಪೂರೈಸಿದ್ದು ವಿಶೇಷ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಬಳಿಕ ಇದೀಗ ನ್ಯೂಜಿಲೆಂಡ್ ನೆಲದಲ್ಲೂ ಕೆಎಲ್ ರಾಹುಲ್ ಶತಕದ ಸಂಭ್ರಮ ಆಚರಿಸಿದ್ದಾರೆ. ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ (ನವೆಂಬರ್ 22) ರಾಹುಲ್ ಅಮೋಘ ಶತಕ ಸಿಡಿಸಿದರು.