ಭಾರತ A ಮತ್ತು ಪಾಕಿಸ್ತಾನ A ನಡುವಿನ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026 ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 22 ರಂದು ದೋಹಾದಲ್ಲಿ ನಡೆಯುವ ಈ ಹೈವೋಲ್ಟೇಜ್ ಕಾದಾಟವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಉಭಯ ತಂಡಗಳು ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿವೆ. ಈ ಮಹತ್ವದ ಪಂದ್ಯದ ನೇರ ಪ್ರಸಾರ, ಸಮಯ, ಸ್ಥಳ ಮತ್ತು ತಂಡಗಳ ವಿವರ ಇಲ್ಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಎರಡೂ ತಂಡಗಳು ಮೈದಾನಕ್ಕಿಳಿದರೆ ಸಾಕು, ಪಂದ್ಯದ ರೋಚಕತೆ ಮತ್ತೊಂದು ಹಂತಕ್ಕೆ ತಲುಪುತ್ತದೆ. ಇದೀಗ ಮತ್ತೊಮ್ಮೆ ಅಂತಹದ್ದೇ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ.