ಲೇಖಕ ರವಿ ಹಂಜ್ ಅವರ ಬಸವ ಮಂಟಪ ಕೃತಿಯ ಕುರಿತು ಹಾಗೂ ಸಂದರ್ಶನದಲ್ಲಿ ಬಸವಣ್ಣನವರ ಬಗ್ಗೆ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿರುವ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದೆ ಪುಸ್ತಕ ಬಿಡುಗಡೆ ಸಮಾ. ಸಮಾಜದ ಸಂಘಟನೆ, ಐಕ್ಯತೆ ಮತ್ತು ಬಸವಾದಿ ಶರಣರ ಆಶಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದಲೇ ಸಮಾರಂಭದಲ್ಲಿ ಮಾತನಾಡಿದ್ದೇವೆ. ಯಾವುದೇ ವ್ಯಕ್ತಿ ಅಥವಾ ಕೃತಿಯಲ್ಲಿರುವ ವಿವಾದಾತ್ಮಕ ವಿಚಾರಗಳನ್ನು ಸಮರ್ಥಿಸಿಲ್ಲ. ನಮ್ಮ ಎಲ್ಲಾ ಕಾರ್ಯಕ್ರಮದಲ್ಲಿ ಆಚಾರ್ಯರ ಸಂದೇಶಗಳನ್ನು ಮತ್ತು ಬಸವಾದಿ ಶರಣರ ವಚನಗಳನ್ನು ಉಲ್ಲೇಖಿಸುತ್ತಾ ಅವರ ತತ್ವಾದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಿಕೊಂಡು ಬಂದಿರುವುದಾಗಿ ಶ್ರೀಗಳು ವಿವರಿಸಿದ್ದಾರೆ.