ರಾಯಚೂರು: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ನಗರದ ಹೊರಲಯದ ಮಂತ್ರಾಲಯ ರಸ್ತೆ. ಮೃತರನ್ನ ಅಭಿಷೇಕ, ಬಸವರಾಜು, ಗಣೇಶ ಗುರುತಿಸಲಾಗಿದ್ದು, ಸಿದಾರ್ಥ ಹಾಗೂ ಭೀಮರೆಡ್ಡಿ ಗಂಭೀರ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಗೊಂಡವರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ..ಇದನ್ನೂ ಓದಿ: ಸ್ನೇಹಿತನ ಜತೆ ಪಬ್ಗೆ ಹೋಗಿದ್ದ ಮೆಡಿಕಲ್ ವಿದ್ಯಾರ್ಥಿನಿಯ ದುರಂತ ಸಾವು: ನ. 9ರ ರಾತ್ರಿ ನಡೆದಿದ್ದೇನು?.ಮೃತರು ಮತ್ತು ಗಾಯಗಳುಗಳು ಒಂದೇ ಕಾರಿನವರು ಎಂದು ತಿಳಿದುಬಂದಿದೆ. ಯರಗೇರಾದಿಂದ ಬರುತ್ತಿದ್ದ ಕಾರು ಹಾಗೂ ರಾಯಚೂರಿನಿಂದ ಹೋಗುತ್ತಿದ್ದ ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ..