Leopard in kitchen: ತಡರಾತ್ರಿ ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ನೇರವಾಗಿ ಮನೆಯ ಅಡುಗೆಮನೆಗೆ ನುಗ್ಗಿದ್ದು, ಮನೆಯವರ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದೆ. ಉತ್ತರಾಖಂಡದ ತ. ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಚಂಬಾ ಸಮೀಪದ ಸೌಂದ್ಕೋಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಸೌಂದ್ಕೋಟಿ ಗ್ರಾಮದ ವಸತಿ ಮನೆಯೊಂದರಲ್ಲಿ ಎಲ್ಲರೂ ನಿದ್ರಿಸುತ್ತಿದ್ದ ವೇಳೆ, ಆಹಾರ ಅರಸುತ್ತಾ ಬಂದ ಚಿರತೆ ಮನೆಯೊಳಗೆ ನುಗ್ಗಿ ನೇರವಾಗಿ ಅಡುಗೆಮನೆ ಸೇರಿಕೊಂಡಿದೆ. ಶಬ್ದ ಕೇಳಿ ಎಚ್ಚರಗೊಂಡ ಮನೆಯ ಮಹಿಳೆ ಜಯಂತಿ ದೇವಿ ಮತ್ತು ಕುಟುಂಬಸ್ಥರು ಅಡುಗೆಮನೆಯಲ್ಲಿ ಚಿರತೆ ಇರುವುದನ್ನು ಕಂಡು ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ.