ಆಫ್ರಿಕಾದ ಡಿಆರ್ ಕಾಂಗೋದಲ್ಲಿ ಕರ್ನಾಟಕದ 95 ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಜನರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ವಿದೇಶದಲ್ಲಿ ವ್ಯಾಪಾರದ ಆಮಿಷವೊಡ್ಡಿ ಏಜೆಂಟರು ಪ್ರತಿಯೊಬ್ಬರಿಂದ ತಲಾ ₹5 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಇದೀಗ ಕಾಂಗೋದಲ್ಲಿರುವ ಇನ್ನೂ 200ಕ್ಕೂ ಹೆಚ್ಚು ಕನ್ನಡಿಗರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಶಿವಮೊಗ್ಗ, ನವೆಂಬರ್ 21: ವಿದೇಶದಲ್ಲಿ ವ್ಯಾಪಾರ ಮಾಡುವ ಅವಕಾಶದ ಆಮಿಷವೊಡ್ಡಿ ಏಜೆಂಟರಿಂದ ವಂಚನೆಗೊಳಗಾದ ಕರ್ನಾಟಕದ 95 ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಜನರು ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DR Congo) ದೇಶದಲ್ಲಿ ಬಂಧನಕ್ಕೊಳಗಾಗಿದ್ದಾರೆ.