ರಸಗೊಬ್ಬರ ಖರೀದಿಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆ ಪರಿಚಯಿಸಿದೆ. ಇನ್ನು ಮುಂದೆ ರೈತರು ಮೊಬೈಲ್ ಆ್ಯಪ್ ಮೂಲಕ ಹತ್ತಿರದ ಅಂಗಡಿಗಳಲ್ಲಿರುವ ಗೊಬ್ಬರದ ದಾಸ್ತಾನು ಪರಿಶೀಲಿಸಿ ಬುಕ್ ಮಾಡಬಹುದು. ಎಫ್ಐಡಿ ಮೂಲಕ ತಿಂಗಳಿಗೆ ಒಂದು ಬಾರಿ ಮಾತ್ರ ಬುಕ್ಕಿಂಗ್ಗೆ ಅವಕಾಶವಿದ್ದು, ಮೂರು ದಿನಗಳೊಳಗೆ ಖರೀದಿಸಬೇಕು. ಕರ್ನಾಟಕದಲ್ಲಿ ಡಿಸೆಂಬರ್ನಿಂದ ಈ ವ್ಯವಸ್ಥೆ ಜಾರಿಯಾಗುವ ನಿರೀಕ್ಷೆಯಿದೆ. ಬೆಂಗಳೂರು, ನವೆಂಬರ್ 21: ಕೃಷಿ ಹಂಗಾಮು ಆರಂಭವಾಯಿತೆಂದರೆ ಸಾಕು, ರೈತರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ರಸಗೊಬ್ಬರದ ಕೊರತೆಯೂ ಒಂದು.