ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇಟಲಿಯ ಬಾಲ್ಯದ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಸಿಖ್ ಉದ್ಯಮಿ ಸುಖದೇವ್ ಸಿಂಗ್ ಕಾಂಗ್ ಯೋಜನೆ ರೂಪಿಸಿದ್ದಾರೆ. ಐತಿಹಾಸಿಕ ಹಿನ್ನೆಲೆಯನ್ನು ಉಳಿಸಿ, ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವುದು ಇದರ ಉದ್ದೇಶ. ಗಾಂಧಿ ಕುಟುಂಬದ ಸಹಕಾರಕ್ಕಾಗಿ ಕಾಂಗ್ ಕಾಯುತ್ತಿದ್ದಾರೆ. ಇದು ಸೋನಿಯಾ ಅವರ ಜೀವನದ ಆರಂಭಿಕ ದಿನಗಳನ್ನು ಪರಿಚಯಿಸುವ ಪ್ರಮುಖ ತಾಣವಾಗಲಿದೆ. ಇಟಲಿ, ನವೆಂಬರ್ 21: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇಟಲಿಯ ಬಾಲ್ಯದ ಮನೆ ಇದೀಗ ಸದ್ದು ಮಾಡುತ್ತಿದೆ. ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಇಟಲಿಯಲ್ಲಿ ನೆಲೆಸಿರುವ ಸಿಖ್ ಉದ್ಯಮಿ ಸುಖದೇವ್ ಸಿಂಗ್ ಕಾಂಗ್ ಯೋಜನೆ ರೂಪಿಸಿದ್ದಾರೆ.