ಕ್ರಿಕೆಟ್ ಜಗತ್ತಿನಲ್ಲಿ ಸಾಮಾನ್ಯವಾಗಿ ಶತಕ ಮತ್ತು 90 ಪ್ಲಸ್ ರನ್ಗಳ ಮಾತು ಕೇಳಿಬರುವುದು ಬ್ಯಾಟರ್ಗಳ ವಿಚಾರದಲ್ಲಿ ಮಾತ್ರ. ಆದರೆ, ಭಾರತೀಯ ಕ್ರಿಕೆಟ್ ವಲಯದಲ್ಲಿ ಈಗ ಒಬ್ಬ ಬೌಲರ್ ಬಾರಿಸಿರುವ 'ಶತಕ'ಗಳದ್ದೇ ದೊಡ್ಡ ಚರ್ಚೆ! ಕೇವಲ 10 ಟೆಸ್ಟ್ ಪಂದ್ಯಗಳ ವೃತ್ತಿಜೀವನದಲ್ಲಿ 3 ಬಾರಿ 100ಕ್ಕೂ ಹೆಚ್ಚು ರನ್ ಹಾಗೂ 2 ಬಾರಿ 90ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ, ವೆಲ್ಲಿಂಗ್ಟನ್ನ ಹಸಿರು ಪಿಚ್ನಲ್ಲೂ ರನ್ ನಿಯಂತ್ರಿಸಲು ಪರದಾಡಿದ್ದಾರೆ.