ಕ್ರಿಕೆಟ್ ಮೈದಾನದಲ್ಲಿ ಭಾರತದ ಯುವ ಪಡೆ ಅಕ್ಷರಶಃ ಅಬ್ಬರಿಸಿದೆ. ಎಸಿಸಿ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ನೇಪಾಳ ತಂಡವನ್ನು ಕೇವಲ 26 ರನ್ಗಳಿಗೆ ಕಟ್ಟಿಹಾಕುವ ಮೂಲಕ ಭಾರತ ಎ ತಂಡ 306 ರನ್ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲ, ಈ ಗೆಲುವಿನೊಂದಿಗೆ 21 ವರ್ಷಗಳ ಹಳೆಯ ವರ್ಲ್ಡ್ ರೆಕಾರ್ಡ್ ಒಂದನ್ನು ಕೂಡ ಯಂಗ್ ಇಂಡಿಯಾ ಪುಡಿಪುಡಿ ಮಾಡಿದ್ದಾರೆ! ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ ಎ ತಂಡವು ಐತಿಹಾಸಿಕ ಸಾಧನೆ ಮಾಡಿದೆ.