ತುಮಕೂರಿನಲ್ಲಿ ಮನೆ ಕೆಲಸಕ್ಕೆಂದು ಬಂದು ವೈದ್ಯರ ಕುಟುಂಬದ ವಿಶ್ವಾಸ ಗಳಿಸಿದ್ದ ಸ್ನೇಹಾ, 800 ಗ್ರಾಂಗೂ ಅಧಿಕ ಚಿನ್ನಾಭರಣ ಕದ್ದಿರುವ ಆರೋಪ ಕೇಳಿಬಂದಿದೆ. ಕದ್ದ ಆಭರಣ ಮಾರಾಟ ಮಾಡಿ ಕಾರು, ಬೈಕ್, ಆಟೋ ಖರೀದಿಸಿದ್ದಲ್ಲದೆ, ಕಳ್ಳತನ ಬಯಲಾಗುವ ಭೀತಿಯಲ್ಲಿ ವೈದ್ಯರ ಕುಟುಂಬದ ಇಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು ಎಂದು ಆರೋಪಿಸಲಾಗಿದೆ. ತುಮಕೂರು, ನವೆಂಬರ್ 21: ಮನೆ ಕೆಲಸಕ್ಕೆಂದು ಬಂದು ವೈದ್ಯರ ಕುಟುಂಬದ ವಿಶ್ವಾಸ ಗಳಿಸಿ, ಮನೆಯಲ್ಲಿದ್ದ ಬರೋಬ್ಬರಿ 800 ಗ್ರಾಂಗೂ ಅಧಿಕ ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ಕದ್ದಿದ್ದ ಮಹಿಳೆಯ ಕೃತ್ಯ ತುಮಕೂರಿನಲ್ಲಿ ಬಯಲಾಗಿದೆ.